ನಮ್ಮ ಗ್ರಂಥ ಪಾಲಕರಿಂದ ಅಚ್ಚುಕಟ್ಟಾಗಿ ಸಂಗ್ರಹಿಸಲ್ಪಟ್ಟ ಕಲಿಕೆಯ ಹಾಗೂ ಪರಾಮರ್ಶನ ಗ್ರಂಥಗಳ ಒಂದು ಸಂಗ್ರಹಗಾರ

ಫೌಂಡೇಷನ್ ನ ಗ್ರಂಥಾಲಯಗಳ ಜಾಲದಲ್ಲಿ ಇರುವಂತಹ ಗ್ರಂಥಾಲಯಗಳೆಂದರೆ, ವಿಶ್ವವಿದ್ಯಾಲಯದ ಗ್ರಂಥಾಲಯಗಳು, ನಾವು ಕೆಲಸ ಮಾಡುವ ಜಿಲ್ಲೆಗಳ ತಾಲ್ಲೂಕು ಮಟ್ಟದಲ್ಲಿರುವ ಶಿಕ್ಷಕ ಕಲಿಕಾ ಕೇಂದ್ರಗಳಲ್ಲಿ ಹಾಗೂ ಜಿಲ್ಲಾ ಸಂಸ್ಥೆಗಳಲ್ಲಿ ಇರುವ ಗ್ರಂಥಾಲಯಗಳು.

ನಮ್ಮ ಅಗಾಧ ಸಂಗ್ರಹದಲ್ಲಿರುವ ಪುಸ್ತಕಗಳು, ಜರ್ನಲ್ ಗಳು, ಸಂಶೋಧನಾ ಲೇಖನಗಳು, ಶಾಲಾ ಪಠ್ಯಪುಸ್ತಕಗಳು, ಬೋಧನೆ ಮತ್ತು ಕಲಿಕಾ ಸಾಮಗ್ರಿಗಳು, ಮಾಹಿತಿ ಸಂಗ್ರಹಗಳು(databases) ಹಾಗೆಯೇ ದೃಶ್ಯ-ಶ್ರಾವ್ಯ ಮತ್ತು ಡಿಜಿಟಲ್ ಸಂಪನ್ಮೂಲಗಳನ್ನು, ಎಲ್ಲ ಹಂತಗಳಿಗೆ ಮತ್ತು ವಯೋಮಾನ ಗುಂಪುಗಳಿಗೆ ಸೇರಿದ ಶಿಕ್ಷಕ ಸಮುದಾಯ, ಶೈಕ್ಷಣಿಕ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಬಳಸಿಕೊಳ್ಳುತ್ತಾರೆ.

Resources-banner
LibraryLocations
border-image

ಅಜೀಂ ಪ್ರೇಮ್‌ಜಿ ಫೌಂಡೇಷನ್‌ ಗ್ರಂಥಾಲಯದ ತಾಣಗಳು

ಬೆಂಗಳೂರು ಮತ್ತು ಭೂಪಾಲ್‌ನಲ್ಲಿರುವ ನಮ್ಮ ವಿಶ್ವವಿದ್ಯಾಲಯಗಳಲ್ಲಿರುವ ಗ್ರಂಥಾಲಯಗಳಲ್ಲದೆ, ಜಿಲ್ಲಾ ಸಂಸ್ಥೆಗಳು ಮತ್ತು ಶಿಕ್ಷಕರ ಕಲಿಕಾ ಕೇಂದ್ರಗಳಲ್ಲೂ ಪುಸ್ತಕಗಳಿಂದ ತುಂಬಿದ ಗ್ರಂಥಾಲಯಗಳಿವೆ. ಗ್ರಂಥಾಲಯಗಳ ರಾಜ್ಯವಾರು ಪಟ್ಟಿಗಾಗಿ ಇಲ್ಲಿ ನೋಡಿ.

Libraryresourceguide
border-image

ಗ್ರಂಥಾಲಯ ಸಂಪನ್ಮೂಲ ಮಾರ್ಗದರ್ಶಿಗಳು​

ನಮ್ಮ ಸಂಪನ್ಮೂಲ ಮಾರ್ಗದರ್ಶಿಗಳು ನಿರ್ದಿಷ್ಟ ವಿಷಯಗಳಿಗೆ ಅಥವಾ ಶೈಕ್ಷಣಿಕ ಶಿಸ್ತುಗಳಿಗೆ ಸಂಬಂಧಿಸಿದ ಆಯ್ದ ಸಂಗ್ರಹಗಳನ್ನು ಒದಗಿಸುತ್ತವೆ. ಇವು ಪ್ರಸ್ತುತವಾದ ಪುಸ್ತಕಗಳು, ಜರ್ನಲ್ ಗಳು, ಮಾಹಿತಿ ಮೂಲಗಳು ಮತ್ತು ಅಧ್ಯಯನ ಸಾಮಗ್ರಿಗಳಿಗೆ ಪ್ರವೇಶವನ್ನು ಒದಗಿಸುತ್ತವೆ. ಇದನ್ನು ಉಪಯೋಗಿಸುವವರು ತಮ್ಮ ಅಧ್ಯಯನ ಅಥವಾ ಸಂಶೋಧನೆಯ ಕ್ಷೇತ್ರದ ಒಳಗೆ ಆಳವಾಗಿ ಪ್ರವೇಶಿಸಲು ಸುಲಭವಾದ ರಹದಾರಿಯನ್ನು ನೀಡುತ್ತದೆ.

LibraryArchives
border-image

ಗ್ರಂಥಾಲಯದ ಸಂಗ್ರಹಾಲಯ

ನಮ್ಮ ಸಂಗ್ರಹಾಗಾರಗಳು ಪುಸ್ತಕಗಳು, ಕಾಗದದ ದಾಖಲೆಗಳು, ಪದಾರ್ಥಗಳು, ಕ್ಷಣಿಕ ಉಪಯೋಗದ ವಸ್ತುಗಳು, ಶ್ರಾವ್ಯ-ದೃಶ್ಯ ಮತ್ತು ಡಿಜಿಟಲ್ ಸಾಮಗ್ರಿಗಳನ್ನು ಹೊಂದಿವೆ. ವ್ಯಕ್ತಿಗಳು ಮತ್ತು ಸಂಸ್ಥೆಗಳು ದಾನವಾಗಿ ನೀಡಿರುವ ಇವೆಲ್ಲವೂ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಫೌಂಡೇಷನ್ ನ ಸದಸ್ಯರಿಗೆ ಮತ್ತು ವಿಶಾಲ ಜನತೆಗೆ ಲಭ್ಯ ಇವೆ.