ಫೌಂಡೇಷನ್ ಮತ್ತು ವಿಶ್ವವಿದ್ಯಾಲಯದ ನಿಯತಕಾಲಿಕೆಗಳು, ಪುಸ್ತಕಗಳು, ಲೇಖನಗಳು ಮತ್ತು ಶೀರ್ಷಿಕೆಗಳ ಕಣಜ
ಈ ಭಾಗವು ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದ ನಿಯತಕಾಲಿಕೆಗಳು, ತರಗತಿಯ ಬೋಧನೆ ಮತ್ತು ಕಲಿಕೆಗೆ ನೆರವಾಗುವಂತಹ ನಿರ್ದಿಷ್ಟ ವಿಷಯಗಳ ಮೇಲಿನ ಕೈಪಿಡಿಗಳು, ಹಾಗೂ ಯೂನಿವರ್ಸಿಟಿ ಮತ್ತು ಫೌಂಡೇಷನ್‌ಗೆ ಸೇರಿದ ಪ್ರಕಟಣೆಗಳ ಡಿಜಿಟಲ್ ಪ್ರತಿಗಳ ಭಂಡಾರಗಳ ಮೇಲೆ ಗಮನ ಹರಿಸುತ್ತದೆ.

ನಮ್ಮ ನಿಯತಕಾಲಿಕೆಗಳು ಮತ್ತು ಕೈಪಿಡಿಗಳನ್ನು, ಶಾಲೆಗಳಲ್ಲಿ ಕಲಿಕಾ ಪ್ರಕ್ರಿಯೆಯನ್ನು ಉತ್ತಮಗೊಳಿಸುವ ಪ್ರಯತ್ನದಲ್ಲಿರುವ ಶಿಕ್ಷಕರು, ಶಿಕ್ಷಣ ತಜ್ಞರು, ಮತ್ತು ಶೈಕ್ಷಣಿಕ ಅಧಿಕಾರಿಗಳಿಗೆ ನೆರವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಕೆಲವು ನಿಯತಕಾಲಿಕೆಗಳು ಹಿಂದಿ ಮತ್ತು ಕನ್ನಡದಂತಹ ಭಾರತೀಯ ಭಾಷೆಗಳಲ್ಲೂ ಲಭ್ಯವಿವೆ.
ನಿಯತಕಾಲಿಕ ಪ್ರಕಟಣೆಗಳ ಸಂಗ್ರಹಾಲಯವು ವಿಶ್ವವಿದ್ಯಾಲಯ ಮತ್ತು ಫೌಂಡೇಷನ್ ಪ್ರಕಟಿಸಿರುವ ಹಲವು ಪುಸ್ತಕಗಳು ಮತ್ತು ಜರ್ನಲ್‌ಗಳ ಡಿಜಿಟಲ್ ಭಂಡಾರವಾಗಿದೆ.


ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದ ನಿಯತಕಾಲಿಕಗಳು
ಶಿಕ್ಷಕರು, ಶಿಕ್ಷಕ ಶಿಕ್ಷಕರು, ಶೈಕ್ಷಣಿಕ ಅಧಿಕಾರಿಗಳು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಆಸಕ್ತಿ ಇರುವವರಿಗಾಗಿ


ಕೈಪಿಡಿಗಳು
ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ( ಎಫ್ಎಲ್ಎನ್ ) ಸಾಮರ್ಥ್ಯಗಳನ್ನು ಗಳಿಸಿಕೊಳ್ಳಲು ಮಕ್ಕಳು ಮತ್ತು/ಅಥವಾ ಶಿಕ್ಷಕರ ಜೊತೆಯಲ್ಲಿ ಕೆಲಸ ಮಾಡುವವರಿಗಾಗಿ ಪ್ರಾಯೋಗಿಕ ಮಾರ್ಗದರ್ಶಿ ಕೈಪಿಡಿಗಳು.

ನಮ್ಮ ಸದಸ್ಯರ ಇತ್ತೀಚಿನ ಪುಸ್ತಕಗಳು
ಹಲವಾರು ವಿಷಯಗಳ ಮೇಲೆ ಫೌಂಡೇಷನ್‌ನ ಸದಸ್ಯರು ಇತ್ತೀಚೆಗೆ ಬರೆದ ಪುಸ್ತಕಗಳನ್ನು ಈ ಭಾಗವು ಪರಿಚಯಿಸುತ್ತದೆ.



ನಿಯತಕಾಲಿಕ ಪ್ರಕಟಣೆಗಳ ಸಂಗ್ರಹಾಲಯ
ಇದು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ಮತ್ತು ಫೌಂಡೇಷನ್ ಅಥವಾ ಸಂಯೋಜಿತ ಸಂಸ್ಥೆಗಳ ಅಡಿಯಲ್ಲಿ ಹೊರತರಲಾಗುವ ಎಲ್ಲ ನಿಯತಕಾಲಿಕೆ/ಪ್ರಕಟಣೆಗಳ ಡಿಜಿಟಲ್ ಪ್ರತಿಗಳನ್ನು ಸಂಗ್ರಹಿಸಲು, ಸಂರಕ್ಷಿಸಲು ಮತ್ತು ವಿತರಿಸಲು ಇರುವ ಸಂಗ್ರಹಾಲಯ/ಭಂಡಾರವಾಗಿದೆ. ಸಂಗ್ರಹಾಲಯವು, ಸದಸ್ಯರುಗಳ ಪ್ರಸ್ತುತ ಕೃತಿ ಮತ್ತು ಹಿಂದಿನ ಪ್ರಕಟಣೆಗಳನ್ನೂ ಸಹ ಒಳಗೊಂಡಿದೆ.

