ಉತ್ತಮ ಆರೋಗ್ಯ ಪ್ರತಿಯೊಬ್ಬ ವ್ಯಕ್ತಿಗೂ ಮತ್ತು ಪ್ರತಿ ಕುಟುಂಬಕ್ಕೂ ಇರುವ ಹಕ್ಕು ಎಂದು ನಾವು ನಂಬುತ್ತೇವೆ.
ಆರೋಗ್ಯ ಎನ್ನುವುದು ಎಲ್ಲರಿಗೂ ಸಿಗಬೇಕಾದ ಒಂದು ಸಾರ್ವಜನಿಕ ಸೌಲಭ್ಯ ಎಂಬುದು ನಮ್ಮ ನಿಲುವು. ಈ ಕಾರಣದಿಂದಲೇ ನಾವು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು – ಸಮುದಾಯದ ಮೊದಲ ಸಂಪರ್ಕದಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ದ್ವಿತೀಯ ಹಂತದ ಆಸ್ಪತ್ರೆಗಳವರೆಗೂ – ಬಲಪಡಿಸಲು ಶ್ರಮಿಸುತ್ತಿದ್ದೇವೆ. ಈ ವ್ಯವಸ್ಥೆಯ ಪ್ರತಿಯೊಂದು ಭಾಗವೂ ಸರಿಯಾಗಿ ಕೆಲಸ ಮಾಡಿದಾಗ, ಆರೈಕೆ ಜನರಿಗೆ ಸುಲಭವಾಗಿ ಸಿಗುತ್ತದೆ, ವಿಶ್ವಾಸಾರ್ಹವಾಗುತ್ತದೆ ಮತ್ತು ಹೆಚ್ಚು ಮಾನವೀಯವಾಗುತ್ತದೆ.
ಈ ಕ್ಷೇತ್ರದಲ್ಲಿ ನಮ್ಮ ಪಯಣ 2022ರಲ್ಲಿ ಆರಂಭವಾದಾಗಿನಿಂದಲೂ ನಿರಂತರವಾಗಿ ಬೆಳೆಯುತ್ತಿದೆ. ಈ ಪಯಣಯಲ್ಲಿ, ಕೆಲವು ಮುಖ್ಯ ತತ್ತ್ವಗಳು ನಮಗೆ ದಾರಿದೀಪವಾಗಿವೆ:
- ವ್ಯಕ್ತಿಗಳು ಮತ್ತು ಕುಟುಂಬಗಳ ಆರೋಗ್ಯಕರ ಜೀವನ ಎನ್ನುವುದು ಕೇವಲ ವೈದ್ಯಕೀಯ ಸೇವೆಗಳನ್ನು ಪಡೆಯುವುದಷ್ಟಕ್ಕೇ ಸೀಮಿತವಾಗಿಲ್ಲ — ರೋಗ ತಡೆಗಟ್ಟವುದು, ಆರೋಗ್ಯದ ಬಗ್ಗೆ ಅರಿವು ಮತ್ತು ಒಟ್ಟಾರೆ ಯೋಗಕ್ಷೇಮವೂ ಅಷ್ಟೇ ಮುಖ್ಯ.
- ತಳಮಟ್ಟದಲ್ಲಿ ಗಟ್ಟಿಯಾದ ಸಮುದಾಯ ಆರೋಗ್ಯ ವ್ಯವಸ್ಥೆ ಇರುವುದು ಅತ್ಯಗತ್ಯ. ಪರಿಣಾಮಕಾರಿಯಾದ ಪ್ರಾಥಮಿಕ ಮತ್ತು ಎರಡನೇ ಹಂತದ ಆರೈಕೆ ವ್ಯವಸ್ಥೆಯ ಬೆಂಬಲವೂ ಬಹಳ ಮುಖ್ಯ.
- ಒಂದು ಸದೃಢ ಹಾಗೂ ಉತ್ತಮವಾಗಿ ಕಾರ್ಯನಿರ್ವಹಿಸುವ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಮಾತ್ರ ದೀರ್ಘಾವಧಿಯಲ್ಲಿ ಪ್ರತಿಯೊಬ್ಬರಿಗೂ ಕೈಗೆಟುಕುವ ಮತ್ತು ಸುಸ್ಥಿರವಾದ ಆರೋಗ್ಯ ಸೇವೆಯನ್ನು ನೀಡಲು ಸಾಧ್ಯ.

ಆರೋಗ್ಯ ಕ್ಷೇತ್ರದಲ್ಲಿ ಉದ್ಯೋಗಗಳು
ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಮತ್ತು ಸಮುದಾಯ ಆರೋಗ್ಯ ಸೇವೆಗಳನ್ನು ಸುಧಾರಿಸುವಲ್ಲಿ ನಿಮಗೆ ತೀವ್ರ ಆಸಕ್ತಿಯಿದ್ದರೆ, ನಿಮ್ಮ ಬಗ್ಗೆ ಹೆಚ್ಚು ತಿಳಿಯಲು ಉತ್ಸುಕರಾಗಿದ್ದೇವೆ. ಬನ್ನಿ, ನಮ್ಮೊಂದಿಗೆ ಕೈಜೋಡಿಸಿ!
ಆರೋಗ್ಯ ಅನುದಾನಗಳು
ಭಾರತದ ತಲುಪಲು ಅತ್ಯಂತ ದುಸ್ತರವಾದ ಪ್ರದೇಶಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸಂಸ್ಥೆಗಳಿಗೆ ನಾವು ನೆರವು ನೀಡುತ್ತೇವೆ. ಅನುದಾನಕ್ಕಾಗಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.


