ಕಿರು ಪರಿಚಯಗಳು, ದಿನಚರಿಗಳು, ವೀಡಿಯೋಗಳು, ಸಂಭಾಷಣೆಗಳು: ಈ ವಿಭಾಗದಲ್ಲಿರುವ ಪ್ರತಿ ಅಂಶವೂ ನಾವು ಮತ್ತು ನಮ್ಮ ಕೆಲಸದತ್ತ ನಿಮ್ಮನ್ನು ಇನ್ನಷ್ಟು ಹತ್ತಿರಕ್ಕೆ ಸೆಳೆಯುತ್ತದೆ

ನಮ್ಮ ಮೂರು ಕಾರ್ಯಾಚರಣೆಯ ಘಟಕಗಳು (ಕ್ಷೇತ್ರ ಸಂಸ್ಥೆಗಳು, ಲೋಕೋಪಕಾರಿ ಘಟಕ ಮತ್ತು ವಿಶ್ವವಿದ್ಯಾಲಯಗಳು), ನ್ಯಾಯಯುತ, ಸಮಾನ, ಮಾನವೀಯ ಮತ್ತು ಸುಸ್ಥಿರ ಸಮಾಜದ ಸ್ಥಾಪನೆಗಾಗಿ ಕೊಡುಗೆ ನೀಡುವ ಫೌಂಡೇಷನ್‌ನ ಧ್ಯೇಯಕ್ಕೆ ಉತ್ತೇಜನ ನೀಡಲು ಏಕೀಕೃತ ರೀತಿಯಲ್ಲಿ ಕೆಲಸ ಮಾಡುತ್ತವೆ. ಭಾರತದಾದ್ಯಂತ ಇರುವ ನಮ್ಮ ಜನರು ಮತ್ತು ಪಾಲುದಾರರಿಂದ ನೇರವಾಗಿ ಈ ಮೂರು ಘಟಕಗಳ ಸಂಕಥನಗಳ ಸಂಗ್ರಹವನ್ನು ನಾವು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ. ವಿಡಿಯೊ, ಚಲಿಸುವ ಚಿತ್ರಗಳು (ಅನಿಮೇಶನ್‌), ಸಂದರ್ಶನಗಳು ಮತ್ತು ಜರ್ನಲ್ಗಳ ರೂಪದಲ್ಲಿರುವ ಈ ಸಂಕಥನಗಳು, ತಾನು ತೊಡಗಿಸಿಕೊಂಡಿರುವ ವಿವಿಧ ಕ್ಷೇತ್ರಗಳಲ್ಲಿ ಫೌಂಡೇಷನ್‌ನ ಪಯಣ ಹಾಗೂ ಇದು ಉಂಟು ಮಾಡಿರುವ ಪರಿಣಾಮಕ್ಕೆ ಕನ್ನಡಿ ಹಿಡಿಯುತ್ತವೆ.

    Play Video ಗ್ರಾಮ ಸಭೆಗಳಲ್ಲಿ ಪಂಚಾಯತ್‌ನ ಪಾತ್ರ | ಆರ್ಯಾ ಪಂಚಾಯತ್

    ಗ್ರಾಮ ಸಭೆಗಳಲ್ಲಿ ಪಂಚಾಯತ್‌ನ ಪಾತ್ರ | ಆರ್ಯಾ ಪಂಚಾಯತ್

    ಬಾಸಿಯಾ ಬ್ಲಾಕ್‌ನ (ಗುಮ್ಲಾ ಜಿಲ್ಲೆ) ಆರ್ಯಾ ಪಂಚಾಯತ್‌ನ ಮುಖ್ಯಸ್ಥರಾದ ಜಸಿಂತಾ ಬಾಗೆ, ತಮ್ಮ ಪಂಚಾಯತ್ ಅನ್ನು ಹೊಸ ದಿಕ್ಕುಗಳಲ್ಲಿ ಕೊಂಡೊಯ್ಯುತ್ತಿದ್ದಾರೆ. ಜಸಿಂತಾ ಪಂಚಾಯತ್ ಮತ್ತು ಗ್ರಾಮ ಸಭೆಯ ನಡುವೆ ಉತ್ತಮ ಸಮನ್ವಯವನ್ನು ಸಾಧಿಸಿದ್ದು, ಇದರಿಂದ ಆರ್ಯಾ ಜನರ ಸಮಸ್ಯೆಗಳು ಬೇಗ ಮತ್ತು ಪರಿಣಾಮಕಾರಿಯಾಗಿ ಪರಿಹಾರವಾಗುತ್ತಿವೆ.

    Watch Video
    Play Video ರಾಜಾಸ್ಥಾನದ ಬಾರ್ಮರ್‌ನಲ್ಲಿ ಸಾಹಿತ್ಯ ಉತ್ಸವ

    ರಾಜಾಸ್ಥಾನದ ಬಾರ್ಮರ್‌ನಲ್ಲಿ ಸಾಹಿತ್ಯ ಉತ್ಸವ

    ರಾಜಾಸ್ಥಾನದ ಬಾರ್ಮರ್‌ನ ಶಿಕ್ಷಣ ಇಲಾಖೆಯೊಂದಿಗಿನ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಬಾರ್ಮರ್‌ ಲಿಟೆರೇಚರ್‌ ಫೆಸ್ಟಿವಲ್‌ನಲ್ಲಿ (14-18 ಫೆಬ್ರವರಿ 2024) 5000ಕ್ಕೂ ಹೆಚ್ಚು ಓದುಗರು ಮತ್ತು ಸಾಹಿತ್ಯ ಪ್ರೇಮಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಬಾರ್ಮರ್‌ನ ಅಜೀಂ ಪ್ರೇಮ್‌ಜಿ ಫೌಂಡೇಷನ್‌ನಲ್ಲಿ ಆಯೋಜಿಸಲಾಗಿತ್ತು.

    Watch Video
    Play Video ಲಸಿಕಾಂದೋಲನದ ಯಶೋಗಾಥೆಯಲ್ಲಿ ಮನೆ ಸಮೀಕ್ಷೆಯ ಪಾತ್ರ – ಉತ್ತರಾಖಂಡದಿಂದ COVID-19ರ ಕಥನಗಳು

    ಲಸಿಕಾಂದೋಲನದ ಯಶೋಗಾಥೆಯಲ್ಲಿ ಮನೆ ಸಮೀಕ್ಷೆಯ ಪಾತ್ರ – ಉತ್ತರಾಖಂಡದಿಂದ COVID-19ರ ಕಥನಗಳು

    ಈ ಚಿತ್ರಕಥೆಯು ಉತ್ತರಾಖಂಡದ ಲಸಿಕಾಂದೋಲನದ ಮುಂಚೂಣಿಯಲ್ಲದ್ದ ಇಪ್ಪತ್ತನಾಲ್ಕು ವೀರರ ಅನುಭವಗಳನ್ನು ತೋರಿಸುತ್ತದೆ. ರಾಜ್ಯದ ಎಲ್ಲರಿಗೂ ಲಸಿಕೆಗಳನ್ನು ನೀಡುವಲ್ಲಿ ಮನೆ ಸಮೀಕ್ಷೆಯ ಪ್ರಾಮುಖ್ಯತೆಯನ್ನು ತಿಳಿಯಿರಿ.

    Watch Video
    Play Video ನಕ್ಷತ್ರಗಳು EP04 | ಸಂಗಯ್ಯ, ಯಾದಗಿರ್‌, ಕರ್ನಾಟಕ

    ನಕ್ಷತ್ರಗಳು EP04 | ಸಂಗಯ್ಯ, ಯಾದಗಿರ್‌, ಕರ್ನಾಟಕ

    ʼನಕ್ಷತ್ರಗಳುʼ ಪಾಡ್‌ಕಾಸ್ಟ್‌ನ 4ನೇ ಎಪಿಸೋಡ್‌ನಲ್ಲಿ ಕರ್ನಾಟಕದ ಯಾದಗಿರ್‌ ತಾಲೂಕಿನ ಸುರ್‌ಪುರದಲ್ಲಿರುವ ಗದ್ದಲಮರಿ ಶಾಲೆಯ ಸುತ್ತಮುತ್ತ ಇರುವ ಹಳ್ಳಿಗಳಲ್ಲಿ ಸಂಗಯ್ಯನವರು ಕೈಗೊಂಡ ಅರಿವು ಮೂಡಿಸುವ ಪ್ರಯತ್ನಗಳ ಬಗ್ಗೆ ಮಾತನಾಡಿದ್ದಾರೆ ಉಮಾಶಂಕರ್‌ ಪೆರಿಯೋಡಿಯವರು. ಸಂಗಯ್ಯನವರು ಸಮುದಾಯದ ಸದಸ್ಯರು ತಮ್ಮ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಲು ಪ್ರೇರೇಪಿಸಿದರು. ಅವರ ಪ್ರಯತ್ನಗಳಿಂದ ಶಾಲೆಯಲ್ಲಿ ಹೆಣ್ಣು ಮಕ್ಕಳ ಹಾಜರಾತಿ ಉತ್ತಮಗೊಂಡಿತು.

    Watch Video
    Play Video ಕಥಾವನ 2023 – ಒಂದು

    ಕಥಾವನ 2023 – ಒಂದು

    ‘ಕಥಾವನ’ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು 2012ರಿಂದ ಆಯೋಜಿಸುತ್ತಿರುವ ಮಕ್ಕಳ ವಾರ್ಷಿಕ ದ್ವಿಭಾಷಾ (ಕನ್ನಡ ಮತ್ತು ಇಂಗ್ಲಿಷ್) ಸಾಹಿತ್ಯೋತ್ಸವ. 2023ನೇ ಸಂಚಿಕೆಯ ʼಕಥಾವನʼದಲ್ಲಿ ಅಲೆದಾಡಿ, ಕರ್ನಾಟಕದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಮಕ್ಕಳ ಸಾಹಿತ್ಯವು ಲಭ್ಯವಾಗುವಂತೆ ಮಾಡಿದ ಮೂರು ಆಸಕ್ತಿಕರ ಕಾರ್ಯಕ್ರಮಗಳ ಬಗ್ಗೆ ತಿಳಿಯೋಣ.

    Watch Video
    ಹಳೆವಿದ್ಯಾರ್ಥಿಗಳ ಕಥೆ I ಮಿಟ್ಟಿ ಕೆಫೆ

    ಹಳೆವಿದ್ಯಾರ್ಥಿಗಳ ಕಥೆ I ಮಿಟ್ಟಿ ಕೆಫೆ

    ಮಿಟ್ಟಿ ಎನ್ನುವುದು ಆರೋಗ್ಯಕರ ಮತ್ತು ರಾಸಾಯನಿಕರಹಿತ ಆಹಾರಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ವಿಶೇಷ ಚೇತನ ವ್ಯಕ್ತಿಗಳು ನಡೆಸುವ ಉದ್ಯಮ ಸಮೂಹವಾಗಿದೆ. ಈ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ.

    Read More
    ಹಳೆವಿದ್ಯಾರ್ಥಿಗಳ ಕಥೆ I ಬಸ್ತರ್‌ ಸೆ ಬಜಾರ್‌ ತಕ್

    ಹಳೆವಿದ್ಯಾರ್ಥಿಗಳ ಕಥೆ I ಬಸ್ತರ್‌ ಸೆ ಬಜಾರ್‌ ತಕ್

    ಕಾಡಿನ ಉತ್ಪನ್ನಗಳನ್ನು ನ್ಯಾಯ ಬೆಲೆಯಲ್ಲಿ ನಗರ ಪ್ರದೇಶದ ಗ್ರಾಹಕರಿಗೆ ಪೂರೈಸುವ ಮೂಲಕ ಛತ್ತೀಸ್‌ಗಢ ರಾಜ್ಯದ ಜನರ ಬದುಕನ್ನು ಉತ್ತಮಪಡಿಸುವ ಸಾಮಾಜಿಕ ಉದ್ಯಮವಿದು.

    Read More
    Play Video ಹಳೆವಿದ್ಯಾರ್ಥಿಗಳ ಕಥೆ I ಅಯಾಂಗ್

    ಹಳೆವಿದ್ಯಾರ್ಥಿಗಳ ಕಥೆ I ಅಯಾಂಗ್

    ಅಸ್ಸಾಂ ರಾಜ್ಯದಲ್ಲಿ ನದಿಯಿಂದ ಆವೃತವಾಗಿರುವ ಮಜೌಲಿ ದ್ವೀಪದ ಜನರ ಜೀವನೋಪಾಯವನ್ನು ಕಟ್ಟಿಕೊಡುವುದರತ್ತ ಹಳೆವಿದ್ಯಾರ್ಥಿಯೊಬ್ಬರು ರೂಪಿಸಿದ ʻಅಯಾಂಗ್‌ʼ ಸಂಸ್ಥೆ ವಿಶೇಷ ಗಮನವನ್ನು ನೀಡುತ್ತಿದೆ.

    Watch Video
    Play Video ಹೊಯ್ಸಳ ಏರೋಬಿಕ್ಸ್: ಮದನಿಕೆಯಂತೆ ಚಲಿಸಿ

    ಹೊಯ್ಸಳ ಏರೋಬಿಕ್ಸ್: ಮದನಿಕೆಯಂತೆ ಚಲಿಸಿ

    ಹೊಯ್ಸಳ ದೇವಾಲಯದ ಗೋಡೆಗಳಲ್ಲಿರುವ ಕೆತ್ತನೆಯನ್ನು ಹಾಗೂ ಏರೋಬಿಕ್ಸ್‌ ತರಬೇತುದಾರರ ಚುರುಕಾದ ಚಲನೆಗಳನ್ನು ಒಮ್ಮೆ ಕಲ್ಪಿಸಿಕೊಳ್ಳಿ. ಎರಡನ್ನೂ ಒಟ್ಟಿಗೆ ತಂದಾಗ, ಬೆಂಗಳೂರಿನ ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಸೃಜನಶೀಲ ಕಾರ್ಯಯೋಜನೆಯೊಂದು ನಿಮ್ಮೆದುರು ಬಂದು ನಿಲ್ಲುತ್ತದೆ.

    Watch Video
    Play Video ಬೇಸಿಗೆ ಶಿಬಿರ 2022: ಮರಳಿ ಶಾಲೆಯತ್ತ ಪಯಣ

    ಬೇಸಿಗೆ ಶಿಬಿರ 2022: ಮರಳಿ ಶಾಲೆಯತ್ತ ಪಯಣ

    ಕೋವಿಡ್‌ ಸಾಂಕ್ರಾಮಿಕದ ಕಾರಣ 18 ತಿಂಗಳುಗಳ ದೀರ್ಘ ಬಿಡುವಿನ ನಂತರ ಶಾಲೆಗಳು ಪುನರಾರಂಭಗೊಂಡಾಗ, ಶಾಲೆಗೆ ಹಿಂದಿರುಗುವುದನ್ನು ಉತ್ತೇಜಿಸುವುದಕ್ಕಾಗಿ ನಾವು ಬೇಸಿಗೆ ಶಿಬಿರಗಳನ್ನು ಆಯೋಜಿಸಿದೆವು. ರಾಜಸ್ಥಾನದ ಬಾರ್ಮೆರ್‌ ನ ಕೆಲವು ಇಣುಕು ನೋಟಗಳು ಇಲ್ಲಿವೆ.

    Watch Video
    1 … 3 4 5 … 7