ಜನ್ ಸ್ವಾಸ್ಥ್ಯ ಸಹಯೋಗ್

ಜನ್ ಸ್ವಾಸ್ಥ್ಯ ಸಹಯೋಗ್ (JSS) ಸಂಸ್ಥೆಯನ್ನು 2000 ರಲ್ಲಿ ಛತ್ತೀಸ್‌ಗಢದ ಬಿಲಾಸ್‌ಪುರ್ ಜಿಲ್ಲೆಯ ಅಚಾನಕ್‌ಮಾರ್ ಹುಲಿ ಸಂರಕ್ಷಿತಾರಣ್ಯದ ಅರಣ್ಯ ಪ್ರದೇಶದಲ್ಲಿ ಕೆಲಸ ಮಾಡಲು ಬಯಸಿದ ಆರೋಗ್ಯ ಕ್ಷೇತ್ರದಲ್ಲಿನ ವೃತ್ತಿಪರರು ಸ್ಥಾಪಿಸಿದರು. ಇದರ ಸಮುದಾಯ ಆರೋಗ್ಯ ಕಾರ್ಯಕ್ರಮವು ಈ ಅಭಯಾರಣ್ಯದ 72 ಹಳ್ಳಿಗಳಿಗೆ ಸೇವೆ ಸಲ್ಲಿಸುತ್ತಿದೆ. ಹಾಗೆಯೇ, ಇದರ 150 ಹಾಸಿಗೆಗಳ ಆಸ್ಪತ್ರೆಯು ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದ ನೆರೆಯ ಒಂಬತ್ತು ಜಿಲ್ಲೆಗಳ ಜನರಿಗೆ ಆರೋಗ್ಯ ಸೇವೆಯನ್ನು ಒದಗಿಸುತ್ತಿದೆ. JSS ಸಂಸ್ಥೆಯು ಕುಟುಂಬ ಆರೈಕೆ ಮತ್ತು ಸಾಮಾನ್ಯ ಶಸ್ತ್ರಚಿಕಿತ್ಸೆಯಲ್ಲಿ ಸ್ನಾತಕೋತ್ತರ ವೈದ್ಯರಿಗೆ ಹಾಗೂ ಶಸ್ತ್ರಚಿಕಿತ್ಸಾ ಕೊಠಡಿ ಮತ್ತು ಪ್ರಯೋಗಾಲಯಗಳಿಗಾಗಿ ಬಿ.ಎಸ್ಸಿ ನರ್ಸ್‌ಗಳು ಮತ್ತು ಪ್ಯಾರಾಮೆಡಿಕ್ಸ್ ಸಿಬ್ಬಂದಿಗೆ ತರಬೇತಿ ನೀಡುತ್ತದೆ. ಜೊತೆಗೆ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಇದು ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶ ಸರ್ಕಾರಗಳೊಂದಿಗೆ ಸೇರಿ ಕಾರ್ಯನಿರ್ವಹಿಸುತ್ತದೆ.